ಬದುಕು
Published on Thursday, May 11, 2023 12:34 | Views 64


ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ
ಕುದುರೆನೀನ್ ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದಕಡೆಗೋಡು
ಪದಕುಸಿಯೇ ನೆಲವಿಹುದು - ಮಂಕುತಿಮ್ಮ
~ ಡಿ.ವಿ.ಜಿ ~

ಅಹಾ . . ಎಂತಹ ಸೊಗಸಾದ ಸಾಲುಗಳು . . ಜೀವನದ ಸಮಸ್ತತೆಯನ್ನು ಕೆಲವೇ ಸಾಲುಗಳಲ್ಲಿ ಸಂಕ್ಷಿಪ್ತವಾಗಿಸಿದ ಕವಿಗೆ ಕೋಟಿ ನಮನ ...

ಎಂದೆಂದಿಗೂ ಬದಲಾಗದ ಈ ನೈಜ್ಯತೆ, ಅದನ್ನು ಅರಿತರೂ ಅವಲೋಕಿಸಿ ಅರ್ಥೈಸಿಕೊಳ್ಳದ ಮನಸ್ಸು, ಪ್ರತಿದಿನವೂ ಹೊಚ್ಚ ಹೊಸ ಕನಸನೊತ್ತಿ ಜೇವನದ ಬಂಡಿಯನೆಳೆವ ಮಾನವ; ನಿಜವಾಗಿಯೂ ಈ ಜೆವನವೊಂದು ಮಾಯೆಯ ಆಟವೇ ಸರಿ ...

ಬಾನಿನಾಚೆಗಿನ ಅಗಾಧತೆಯ ಕಾಣ್ವ ತವಕ
ತೀರದದು ರೆಕ್ಕೆ ತೆರೆದು ಅಲ್ಲಿ ತೇಲ್ವ ತನಕ

ಪ್ರತಿಪರಿಚಯದಿ ನನ್ನನ್ನರಸುತ ಸಾಗಿದೆ ಪಯಣ
ಪ್ರಭೆಯನರಸುತ ಇರುಳ ಕಾನನದಿ ಕಾದಿದೆ ನಯನ

ತಿರುಗಿದೊಡನೆ ಮನದ ಬಯಕೆ ತೀರಿತೆಂಬ ಭಾಸ
ಮರೀಚಿಕೆಯದು ಮಾಯವಾಯ್ತು ಮರಳುಗಾಡಲೆನ್ನ ವಾಸ

ಮುಚ್ಚಲಾರೆ ನಿಲುವಂತದಲ್ಲ ಮನದ ಮಿಡಿತ
ಅಲಿಸುವವರ್ಯಾರು ಇಲ್ಲ ಅದರ ನುಡಿಯ ತುಡಿತ

ಬರುವುದೊಂದು ಜ್ಯೋತಿ ಎನ್ನ ಬಾಳಲೆಂಬ ಬಯಕೆ
ಜಿಗಿದು ಅದನು ಹಿಡಿದುಕೊಂಬೆನೆಂಬ ಅಸೆ ಮನಕೆ

ಸಂಗಾತಿ ಸೇರ್ವ ಜೇವನ ಸುಂದರ ಎಂಬ ಸತ್ಯ ಮಾನ್ವಿತ
ಸುಖ-ದುಃಖಗಳೆರಡ ಮೀರ್ವ ಏಕಾಂತವೊಂದೇ ನಿತ್ಯ ಶಾಶ್ವತ

ಆದರು ...

ಬಾನಿನಾಚೆಗಿನ ಅಗಾಧತೆಯ ಕಾಣ್ವ ತವಕ
ತೀರದದು ರೆಕ್ಕೆ ತೆರೆದು ಅಲ್ಲಿ ತೇಲ್ವ ತನಕ