Published on Wednesday, May 10, 2023 00:15 | Views 74
ಕಂಪ ಸೂಸುತಿಹ ಭೂಮಿಯ ಘಮನ
ಭೋರ್ಗರೆಯುತಿಹ ಮಳೆ ದೇವಗೆ ನಮನ
ಕಣ್ಣಿಗಪ್ಪಳಿಸಿದೆ ಮಿಂಚಿನ ಹೂಡೆತ
ಅವಳ ನೋಟಕ್ಕೆ ಹೆಚ್ಚಿದೆ ಎದೆ ಮಿಡಿತ
ಮೈಯ್ಯ ಸೋಕಲು ತಣ್ಣನೆ ಗಾಳಿ
ಮನದಲಿ ಎದ್ದಿತು ಬಯಕೆಯ ಬಿರುಗಾಳಿ
ಸನಿಹಕೆ ಸೆಳೆಯಿತು ಜೀವದ ಬಯಕೆ
ಮೈ ಮನ ತಣಿಯಿತು ಗುಡುಗಿನ ಲಯಕೆ
ತನು ಕಂಪಿಸೆ ಬಿಸಿ ಗಾಳಿಯ ಬರಕೆ
ಮನ ಮಿಡಿದಿದೆ ಶ್ರುತಿ ಸೇರಲು ಸ್ವರಕೆ
ಓಂದಾಗಿವೆ ಇಂದು ಎಮ್ಮಯ ಜೀವ
ಅರಳಿಸಿ ಎದೆಯಲಿ ಜೀವದ ಭಾವ
ಕಂಪ ಸೂಸುತಿಹ ಭೂಮಿಯ ಘಮನ
ಭೋರ್ಗರೆಯುತಿಹ ಮಳೆ ದೇವಗೆ ನಮನ